ನಾಯಕತ್ವದ ಯಶಸ್ಸನ್ನು ತಂಡಕ್ಕೆ ಅರ್ಪಿಸಿದ ಅಜಿಂಕ್ಯ ರಹಾನೆ!

ಬ್ರಿಸ್ಬೇನ್: ಆಸ್ಟ್ರೇಲಿಯಾ ನೆಲದಲ್ಲಿ ಟೀಮ್‌ ಇಂಡಿಯಾಗೆ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸರಣಿ ಗೆಲುವು ತಂದು ಕೊಟ್ಟರೂ ನಾಯಕತ್ವದ ಶ್ರೇಯಸ್ಸನ್ನು ತಂಡದ ಸಂಘಟಿತ ಹೋರಾಟಕ್ಕೆ ಅರ್ಪಿಸಿದ

ಅಜಿಂಕ್ಯ ರಹಾನೆ ಅಭಿಮಾನಿಗಳ ಮನ ಗೆದ್ದಿದ್ದಾರೆ.

ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಸರಣಿ ಆರಂಭಿಸಿದ ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಕುಸಿದು ಹೀನಾಯ ಸೋಲನುಭವಿಸಿತ್ತು. ನಂತರ ಕೊಹ್ಲಿ ತಂದೆಯಾಗುತ್ತಿರುವ ಕಾರಣ ಟೀಮ್ ಇಂಡಿಯಾ ಸೇವೆಯಿಂದ ರಜೆ ತೆಗೆದುಕೊಂಡರು.

0-1 ಅಂತರದ ಹಿನ್ನಡೆ ಅನುಭವಿಸಿದ್ದ ತಂಡದ ಸಾರಥ್ಯ ವಹಿಸಿಕೊಂಡ ಅಜಿಂಕ್ಯ ರಹಾನೆ ಸರಣಿಯಲ್ಲಿ ಉಳಿದ 3 ಪಂದ್ಯಗಳಲ್ಲಿ 2 ಜಯ ಮತ್ತೊಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ತಂದುಕೊಡುವ ಮೂಲಕ ಕಾಂಗರೂ ನಾಡಲ್ಲಿ ಭಾರತ ಮತ್ತೊಮ್ಮೆ ಟೆಸ್ಟ್‌ ಸರಣಿ ಗೆಲುವಿನ ವಿಜಯೋತ್ಸವ ಆಚರಿಸುವತೆ ಮಾಡಿದ್ದಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ