ರಾಜಧಾನಿ ಮುಖ್ಯಮಂತ್ರಿ ಮಗಳಿಗೇ ಪಂಗನಾಮ!

ರಾಷ್ಟ್ರ ರಾಜಧಾನಿ ನವದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮಗಳಿಗೆ ಯಾರೋ ಖದೀಮರು ಪಂಗನಾಮ ಹಾಕಿದ್ದಾರೆ. ಆನ್​​ಲೈನ್​ ಮಾರುಕಟ್ಟೆಯನ್ನು ನಂಬಿದ್ದ ಅವರಿಗೆ 34 ಸಾವಿರ ರೂಪಾಯಿ ಮೋಸ ಮಾಡಲಾಗಿದೆ.

ಹರ್ಷಿತಾ ಕೇಜ್ರಿವಾಲ್​ ಒಎಲ್​ಎಕ್ಸ್​ನಲ್ಲಿ ಸೋಫಾ ಮಾರಾಟಕ್ಕೆ ಹಾಕಿದ್ದರಂತೆ. ಯಾರೋ ಒಬ್ಬ ಖದೀಮ ಅದನ್ನು ಕೊಳ್ಳುವುದಾಗಿ ಹೇಳಿದ್ದಾನೆ. ಆಕೆಗೆ ನಂಬಿಕೆ ಬರಲೆಂದು ಸ್ವಲ್ಪ ಹಣವನ್ನೂ ಆಕೆಯ ಖಾತೆಗೆ ಹಾಕಿದ್ದಾನೆ. ಅದಾದ ನಂತರ ಬಾರ್​ ಕೋಡ್​ ಒಂದನ್ನು ಆಕೆಗೆ ಕಳುಹಿಸಿ ಸ್ಕ್ಯಾನ್​ ಮಾಡಲು ಹೇಳಿದ್ದಾನೆ. ಆ ಕೋಡ್​ ಸ್ಕ್ಯಾನ್​ ಮಾಡಿದ ಹರ್ಷಿತಾ ಬ್ಯಾಂಕ್​ ಖಾತೆಯಿಂದ ಇದ್ದಕ್ಕಿದ್ದಂತೆ ಎರಡು ಬಾರಿ ಹಣ ವಿತ್​ಡ್ರಾ ಆಗಿದೆ. ಒಮ್ಮೆ 20 ಸಾವಿರ ಮತ್ತೊಮ್ಮೆ 14 ಸಾವಿರ ರೂಪಾಯಿ ವಿತ್​ ಡ್ರಾ ಆಗಿದೆ.ಒಮ್ಮೆ 20 ಸಾವಿರ ಮತ್ತೊಮ್ಮೆ 14 ಸಾವಿರ ರೂಪಾಯಿ ವಿತ್​ ಡ್ರಾ ಆಗಿದೆ.
ಈ ವಿಚಾರವಾಗಿ ಮುಖ್ಯಮಂತ್ರಿಗಳ ನಿವಾಸದ ಸನಿಹವಿರುವ ಸಿವಿಲ್​ ಲೈನ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಖದೀಮರ ಹುಡುಕಾಟದಲ್ಲಿ ಪೊಲೀಸರು ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ