ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಪಿಎಂ ಸ್ವ-ನಿಧಿ(PMSVANidhi)’ ಯೋಜನೆಯಡಿ ಕಿರು ಸಾಲ ವಿತರಣೆ ಮಾಡುತ್ತಿರುವ ಬಗ್ಗೆ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸ್ವಾವಲಂಭಿ ಬದುಕು ಕಟ್ಟಲು ನೆರವಾಗುವ ಉದ್ದೇಶದಿಂದ ರೂ. 10,000ಗಳನ್ನು ಕಿರು ಸಾಲ ನೀಡಲು ಕೇಂದ್ರ ಸರ್ಕಾರವು ಸದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸಾಲ ಮಂಜೂರಾತಿ ಪಡೆದಿರುವ ಫಲಾನುಭವಿಗಳು ಬ್ಯಾಂಕ್ ಸಂಪರ್ಕಕ್ಕೆ ಬಾರದಿರುವ ಕಾರಣ, ಅವಶ್ಯಕ ದಾಖಲಾತಿ ಕಾರ್ಯವನ್ನು ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಸಾಲ ವಿತರಿಸುವ ಕಾರ್ಯವನ್ನು ತ್ವರಿತಗೊಳಿಸಬೇಕಾಗಿರುತ್ತದೆ.

ಆದುದರಿಂದ, ಸಂಬಂಧಪಟ್ಟ ಬ್ಯಾಂಕ್‌ಗಳ ಸಹಯೋಗದೊಂದಿಗೆ ಮಂಜೂರಾತಿ ಪಡೆದಿರುವ ಫಲಾನುಭವಿಗಳನ್ನು ಬ್ಯಾಂಕ್ ಸಂಪರ್ಕಕ್ಕೆ ತಂದು ಸಾಲ ವಿತರಿಸುವ ಸಲುಗಾಗಿ ಪಾಲಿಕೆಯ 8 ವಲಯಗಳ(ಪೂರ್ವ, ಪಶ್ಚಿಮ, ದಕ್ಷಿಣ, ರಾಜರಾಜೇಶ್ವರಿನಗರ, ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹದೇವಪುರ)ಜಂಟಿ ಆಯುಕ್ತರು ರವರ ಕಛೇರಿಯಲ್ಲಿ ಹಾಗೂ ಕೇಂದ್ರ ಕಛೇರಿಯ ಡಾ|| ರಾಜ್‌ಕುಮಾರ್ ಗಾಜಿನ ಮನೆ, ಆವರಣದಲ್ಲಿ ದಿನಾಂಕ 27-02-2021, 06-03-2021 ಮತ್ತು ದಿನಾಂಕ 13-03-2021 ರಂದು ಬೆಳಿಗ್ಗೆ 11.00 ಗಂಟೆಯಿಂದ ಸಂಜೆ 5.30ರವರೆಗೆ ಶಿಬಿರವನ್ನು ಏರ್ಪಡಿಸಲಾಗಿರುತ್ತದೆ.

ಸದರಿ ಶಿಬಿರಕ್ಕೆ ಕಿರುಸಾಲಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಬೀದಿ ಬದಿ ವ್ಯಾಪಾರಿಗಳು ದಾಖಲಾತಿ ಪರಿಶೀಲನೆಗಾಗಿ ಅರ್ಜಿ ಹಾಕುವ ಸಂದರ್ಭದಲ್ಲಿ ಒದಗಿಸಿರುವ ದಾಖಲಾತಿಗಳ ಮೂಲ ಪ್ರತಿಗಳೊಂದಿಗೆ ಹಾಜರಾಗಿ ಸಂಬಂಧಪಟ್ಟ ಬ್ಯಾಂಕ್ ಪ್ರತಿನಿಧಿಗಳಿಂದ ಕಿರುಸಾಲ ಮಂಜೂರಾತಿ ದೃಢೀಕರಣ ಪತ್ರವನ್ನು ಪಡೆದ ನಂತರ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದಾಗಿರುತ್ತದೆ.

ಆದ್ದರಿಂದ, ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಅರ್ಜಿಸಲ್ಲಿಸಿರುವ ಅರ್ಜಿದಾರರು ಸದರಿ ಸೌಲಭ್ಯವನ್ನು ನಿಗಧಿಪಡಿಸಲಾಗಿರುವ ಸ್ಥಳಗಳಲ್ಲಿ ನಡೆಯುವ ಶಿಬಿರದಲ್ಲಿ ದಾಖಲಾತಿಗಳೊಂದಿಗೆ ಆಗಮಿಸಿ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಸಬೇಕಾಗಿ ವಿನಂತಿ.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ