ಮಹದೇವಪುರ ವಲಯದಲ್ಲಿನ ಅನಧಿಕೃತ ಓಎಫ್‌ಸಿ ಕೇಬಲ್‌ಗಳ ತೆರವು ಕಾರ್ಯಾಚರಣೆ ಕುರಿತು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಯುಕ್ತರವರ ಸೂಚನೆ ಮೇರೆಗೆ ಮಹದೇವಪುರ ವಲಯದಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಒಟ್ಟು 32.40 ಕಿ.ಮೀ ಅನಧಿಕೃತವಾಗಿ ಅಳವಡಿಸಲಾಗಿದ್ದ ಓಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಗಿರುತ್ತದೆ.

ಕೆ.ಆರ್.ಪುರಂ ಉಪ ವಿಭಾಗದಲ್ಲಿ 5.00 ಕಿ.ಮೀ, ಹೆಚ್.ಎ.ಎಲ್ ಉಪ ವಿಭಾಗದಲ್ಲಿ 2.50 ಕಿ.ಮೀ, ಹೊರಮಾವು ಉಪ ವಿಭಾಗದಲ್ಲಿ 5.00 ಕಿ.ಮೀ, ಹೂಡಿ ಉಪ ವಿಭಾಗದಲ್ಲಿ 9.60 ಕೀ.ಮೀ, ವೈಟ್ ಫೀಲ್ಡ್ ಉಪ ವಿಭಾಗದಲ್ಲಿ 4.30 ಕೀ.ಮೀ ಮತ್ತು ಮಾರತ್ತಹಳ್ಳಿ ಉಪ ವಿಭಾಗದದಲ್ಲಿ 5.00 ಕೀ.ಮೀ ವ್ಯಾಪ್ತಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ವಾರ್ಡ್ ಮಟ್ಟದ ಸಹಾಯಕ ಅಭಿಯಂತರವರ ಸಹಯೋಗದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳ ಮೇಲೆ ಜೋತಾಡುತ್ತಿದ್ದ ಹಾಗೂ ಮರಗಳಿಗೆ ಸುತ್ತಿದ್ದ ಕೇಬಲ್‌ಗಳನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ತೆರವು ಗೊಳಿಸಲಾಗಿದೆ.

ಮುಂದುವರೆದು ಬರುವ ದಿನಗಳಲ್ಲಿ ಇಂತಹ ಯಾವುದೇ ಸಂಸ್ಥೆಗಳಾಗಲಿ ಅನಧಿಕೃತವಾಗಿ ಕೇಬಲ್‌ಗಳನ್ನು ಅಳವಡಿಸಿದರೆ ಅಂತಹ ಕೇಬಲ್‌ಗಳನ್ನು ತೆರವುಗೊಳಿಸಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಮಹದೇವಪುರ ವಲಯದ ಮುಖ್ಯ ಇಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ರವರು ತಿಳಿಸಿದ್ದಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ