ಕರೋನ ಭಯದಿಂದ ಇಡೀ ಕುಟುಂಬ ಆತ್ಮಹತ್ಯೆ

ಆನೇಕಲ್​: ಕರೋನ ಸೊಂಕಿನಿಂದ ತಾಯಿ ಮೃತ ಪಟ್ಟ ಒಂದುವರೆ ತಿಂಗಳಿಗೆ ಇಡೀ ಕುಟುಂಬ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಆನೇಕಲ್​ನ ಅತ್ತಿಬೆಲೆ ನಿವಾಸಿಯಾದ ಸತೀಶ್​​ 45 ರವರ ಪತ್ನಿ ಆಶಾ 40 ಕಳೆದ ಒಂದುವರೆ ತಿಂಗಳ ಹಿಂದೆ ಕರೋನ ಸೊಂಕಿ ನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು. ಆಶಾ ಮೃತ ಪಟ್ಟಿದ್ದರಿಂದ ಇಡೀ ಕುಟುಂಬ ಮಾನಸಿಕವಾಗಿ ಕಿನ್ನತೆಗೋಳಗಾಗಿ ಬೆಳಗಿನ ಜಾವ ಡೆತ್​ ನೋಟ್​​ ಬರೆದಿಟ್ಟು ಸತೀಶ್​​ ತಮ್ಮ ಇಬ್ಬರು ಮಕ್ಖಳಾದ ಕೀರ್ತಿ 18, ಮೋನಿಶಾ 14 ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಸತೀಶ್​ ಖಾಸಗಿ ಕಂಪನಿಯೊಂದರಲ್ಲಿ ಕೇಲಸ ಮಾಡುತ್ತಿದ್ದು 19 ವರ್ಷಗಳ ಹಿಂದೆ ಆಶಾರನ್ನು ಪ್ರೇಮ ವಿವಾಹವಾಗಿದ್ದ ಎನ್ನಲಾಗಿದೆ. ಮೃತ ದಂಪತಿಗಳ ಮೊದಲನೆಯ ಮಗಳಾದ ಕೀರ್ತಿ ದ್ವಿತಿಯ ಪಿಯುಸಿಯಲ್ಲಿ ಶೇಕಡ 98 ರಷ್ಟು ಅಂಕಗಳಿಸಿದ್ದರು. ಎರಡನೆಯ ಮಗಳಾದ ಮೋನಿಷಾ ಉತ್ತಮ ನೃತ್ಯಗಾರ್ತಿಯಾಗಿದ್ದರು. ತಾಯಿ ಆಶಾ ಮೃತ ಪಟ್ಟು ಮೂರು ದಿನಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಈ ಕುಟುಂಬ ಮಾಡಿರುವ ಬಗ್ಗೆ ಡೆತ್​ ನೋಟ್​​ನಲ್ಲಿ ಉಲ್ಲೆಖಿಸಿದ್ದು, ಸಂಬಂಧಿಕರು ಮನೆಯಲ್ಲಿದ್ದರಿಂದ ಮಾನಸಿಕವಾಗಿ ಕಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ನಿನ್ನೆವರೆಗು ಮನೆಯಲ್ಲಿ ಸಂಬಂಧಿಕರಿದ್ದು ನಿನ್ನೆ ಅವರವರ ಊರಿಗಳಿಗೆ ಹೋಗಿದ್ದರಿಂದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೃತರ ಸಂಬಂಧಿಕಾರು ಮಾಹಿತಿಯನ್ನು ನೀಡಿದರು. ಅತ್ತಿಬೆಲೆ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ