ರಾಜಧಾನಿದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಡಲು ಹೊಸದೊಂದು ಪ್ರಯತ್ನ

ಆನೇಕಲ್ : ದೇಶದಲ್ಲಿ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಸರಸ್ನೇಹಿ ವಾಹನಗಳನ್ನು ಪ್ರತಿಯೊಬ್ಬರು ಬಳಸಬೇಕು ಎಂದು ಬಿಬಿಎಂಪಿ ಮಾಜಿ ಸದಸ್ಯ ಎನ್.ರಮೇಶ್ ತಿಳಿಸಿದರು.

ಅವರು ಸರ್ಜಾಪುರ ಸಮೀಪದ ಮುತ್ತನಲ್ಲೂರು ಗೇಟ್ ಬಳಿ ನೂತನವಾಗಿ ಪ್ರಾರಂಭವಾಗಿರುವ ಶ್ರೀ ಲಕ್ಷ್ಮೀ ನರಸಿಂಹ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಚಾಲನೆ ನೀಡಿ ಮಾತನಾಡಿದರು

ಬೆಂಗಳೂರಿನಂತ ನಗರದಲ್ಲಿ ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಇದರಿಂದ ವಾಹನಗಳ ಹೊಗೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತಿದ್ದು ಮತ್ತು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತಿದೆ ಅದರಿಂದ ಪ್ರಕೃತಿ ಸ್ನೇಹಿ (ಹೊಗೆ ರಹಿತ) ವಾಹನಗಳನ್ನು ಬಳಕೆ ಮಾಡಬೇಕು ಎಂದರು.

ಬಿಟಿಎಂ ಆಟೋ ಪ್ರೈ.ಲಿ. ಕಂಪನಿಯ ಮುಖ್ಯಸ್ಥೆ ಶ್ವೇತಾ ಮೇಟಿ ಮಾತನಾಡಿ, ದೇಶದಲ್ಲಿ ದಿನ ನಿತ್ಯ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು ಜನರು ಸಾಕಷ್ಟು ಪರಿತಪ್ಪಿಸುವ ಪರಿಸ್ಥಿತಿ ಎದುರಾಗಿದೆ, ಈ ವಿದ್ಯುತ್ ವಾಹನಗಳು ಸರಾಸರಿ 70 ರಿಂದ 80 ಕಿಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ಶೋರೂಂ ಇದ್ದು ಬೆಂಗಳೂರು ಹೊರ ಭಾಗದಲ್ಲಿ ಮೂರನೆಯ ಶೋರೂಂ ಇದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಬಿ‌.ಎಂ. ರಾಮಚಂದ್ರ, ಶೋರೂಂ ಮಾಲೀಕರಾದ ಚಂದನ್ ರೆಡ್ಡಿ, ಕನ್ನಡ ಪರ ಹೋರಾಟಗಾರ ಮಹಾನ್, ಮುಖಂಡರಾದ ಮುನಿರೆಡ್ಡಿ, ನರಸಿಂಹ ರೆಡ್ಡಿ, ಹಾಗೂ ಮತ್ತಿತರರು ಹಾಜರಿದ್ದರು.


Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ