ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ಕರೋನಾ ವಾರಿಯರ್ಸ್‌ ವೈದ್ಯರಿಗೆ ಸನ್ಮಾನ ಸಮಾರಂಭ

ಆನೇಕಲ್ : ನಾವೆಲ್ಲರೂ ಕರೊನಾ ವಿರುದ್ಧ ಹೋರಾಡಬೇಕಿದೆ, ನಮ್ಮ ಉಳಿವಿಗೆ ನಿರಂತರವಾಗಿ ಶ್ರಮಿಸಿದ ವೈದ್ಯರಿಗೆ ಎಂದು ಐ.ಎಪ್.ಐ.ಎಮ್ ಕಾಲೇಜಿನ ಮುಖ್ಯಸ್ಥ ಸಂಜಯ್ ಪಡೌಡೆ ಹೇಳಿದರು.
ಅವರು ಗುರುವಾರ ಎಲೆಕ್ಟ್ರಾನಿಕ್ ಸಿಟಿಯ ಐ.ಎಪ್.ಐ.ಎಮ್ ಕಾಲೇಜಿನಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ಆಯೋಜಿಸಿದ್ದ ಕರೊನಾ ವಾರಿಯರ್ಸ್‌ ವೈದ್ಯರುಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು, ಕರೊನಾ ಮಾಹಾಮಾರಿ ತಡೆಯಲು ಇಡೀ ದೇಶದಲ್ಲಿ ವೈದ್ಯರು, ನರ್ಸುಗಳು, ಸೇರಿದಂತೆ ಹಲವಾರು ಜನ ನಿರಂತರವಾಗಿ ಶ್ರಮಿಸಿದ್ದಾರೆ, ತಮ್ಮ ಕುಟುಂಬವನ್ನು ಲೆಕ್ಕಿಸದೆ ಅದೆಷ್ಟೋ ಜನ ವೈದ್ಯರು ಲಕ್ಷಾಂತರ ಜನರ ಜೀವ ಉಳಿಸಿದ್ದಾರೆ, ಅಂತಹ ವೈದ್ಯರಿಗೆ ಎಷ್ಟು ಧನ್ಯವಾದ ತಿಳಿಸಿದರು ಸಾಲದು ಎಂದರು.
ವೈದ್ಯೋ ನಾರಾಯಣೋ ಹರಿ ಎನ್ನುವ ಹೆಸರಿನಂತೆ ನಮ್ಮ ವೈದ್ಯರ ಕಾರ್ಯವೈಖರಿಯನ್ನು ಕೇವಲ ವೈದ್ಯರ ದಿನದಂದು ಮಾತ್ರವಲ್ಲ ದಿನವೂ ಕೂಡ ನೆನೆಸಿಕೊಳ್ಳಬೇಕು, ವಿಶ್ವ ವೈದ್ಯರ ದಿನದ ಅಂಗವಾಗಿ ಎಲ್ಲರಿಗೂ ಕೂಡ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳಿದರು.
ಕೋವಿಡ್ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ, ನಾವು ಧೈರ್ಯದಿಂದ ಈ ಮಹಾಮಾರಿ ರೋಗವನ್ನು ಎದುರಿಸಿ, ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ನಾವು ಮೊದಲ ಆದ್ಯತೆ ನೀಡಬೇಕು, ಧೈರ್ಯದಿಂದ ಮಾತ್ರ ಎಲ್ಲವನ್ನು ಗೆಲ್ಲಲು ಸಾಧ್ಯವಿದೆ, ಯೋಗ ಪ್ರಾಣಾಯಾಮಗಳನ್ನು ಹೆಚ್ಚಾಗಿ ಮಾಡಬೇಕು ಇದರಿಂದ ಮನೋಸ್ಥೈರ್ಯ ಹೆಚ್ಚಾಗಿ ಆರೋಗ್ಯ ವೃದ್ಧಿಯಾಗಲಿದೆ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ವೈದ್ಯ ಸವಿತಾ, ಕರೊನಾ ವಂದನೆ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಜನ ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ ಅವರೆಲ್ಲರೂ ಕೂಡ ಮೂರನೇ ಅಲೆ ಬರುತ್ತದೆ ಎನ್ನುವ ನಿಟ್ಟಿನಲ್ಲಿ ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದು, ಜನ ಮೈಮರೆತು ಗುಂಪುಗುಂಪಾಗಿ ಸೇರುವುದು ಸಾರ್ವಜನಿಕ ವಲಯದಲ್ಲಿ ಮಾಸ್ಕ್ ದರಿಸದೆ ಓಡಾಡುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಕಲ್ಪನಾ ಪಡೋಡೆ, ಪ್ರಾಂಶುಪಾಲ ಡಾ. ವಿಶ್ವನಾಥಯ್ಯ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸುತ್ತಮುತ್ತಲಿನ ಕೆಲವು ಆಸ್ಪತ್ರೆಗಳ ಸುಮಾರು 50ಕ್ಕೂ ಹೆಚ್ಚು ಜನ ಕರೊನಾ ವಾರಿಯರ್ಸ್‌ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ