ಸಾಮಾನ್ಯ ಜನರು ಬೀದಿಗೆ ಬೀಳಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕಾರಣ ಎಂದು ಬೆ.ಗ್ರಾ. ಸಂಸದ ಡಿಕೆ ಸುರೇಶ್ ಆರೋಪ

ಆನೇಕಲ್. ಜುಲೈ.೦೨ ; ಕರೋನದಿಂದ ಸಾರ್ವಜನಿಕರು ಕಾಪಾಡಲು ಹಾಗೂ ಅವರ ಕುಟುಂಬಗಳು ಬೀದಿಗೆ ಬೀಳಲು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನವೇ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ನೇರ ಆರೋಪ ಮಾಡಿದರು.

ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿ ಎಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದರು, ಕರೋನಾ ಒಂದನೇ ಅಲ್ಲೇ ಬಂದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಜವಾಬ್ದಾರಿತನ ನಿನ್ನ ವರ್ತಿಸಿ ಬಹಳಷ್ಟು ಮಂದಿ ಹಾಗೂ ಕುಟುಂಬಕ್ಕೆ ಆಧಾರವಾಗಿದ್ದ ಅವರನ್ನು ಕಳೆದುಕೊಂಡ ಕುಟುಂಬ ಬೀದಿಪಾಲಾಗಿವೆ, ಸರ್ಕಾರ ಸುಖಾಸುಮ್ಮನೆ ಪ್ಯಾಕೇಜುಗಳನ್ನು ಘೋಷಣೆ ಮಾಡಿ ಸಾರ್ವಜನಿಕರಿಗೆ ಕಣ್ಣೊರೆಸುವ ಕಾರ್ಯತಂತ್ರ , ಪ್ಯಾಕೇಜ್ ಹೆಸರಿಗೆ ಮಾತ್ರ ಘೋಷಣೆಯಾಗಿದ್ದು ಅರ್ಹ ಫಲಾನುಭವಿಗಳಿಗೆ ಯಾವುದೇ ಹಣ ಸಂದಾಯವಾಗಿಲ್ಲ ಎಂದು ಹೇಳಿದರು.
ಭಾರತ ದೇಶದಲ್ಲಿ 23 ಕೋಟಿಗೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ರಾಜ್ಯದಲ್ಲಿ 2600000 ಅಧಿಕ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಇವನ್ನೆಲ್ಲ ಸರಿಪಡಿಸುವುದು ಅನ್ನು ಬಿಟ್ಟು ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಟಿವಿ ಪರದೆ ಮೇಲೆ ಬರುವುದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವದರಲ್ಲಿ ತಲ್ಲೀನರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಇನ್ನು ಎರಡು ವರ್ಷ ವಿಧಾನಸಭಾ ಚುನಾವಣೆಗೆ ಬಾಕಿಯಿದ್ದು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುತ್ತದೆ ಆಗ ಯಾರು ಸಿಎಂ ಆಗಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ಮತ್ತು ಆಯ್ಕೆಯಾದ ಶಾಸಕರು ಆಯ್ಕೆಮಾಡುತ್ತಾರೆ ನಾನು ಯಾವ ರೇಸ್ನಲ್ಲಿ ಇಲ್ಲ ಎಂದು ತಿಳಿಸಿದರು.

ಕಂದಾಯ ಸಚಿವ ಆರ್ ಅಶೋಕ್ ಪ್ರಚಾರಕ್ಕೋಸ್ಕರ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ, ಬಿಜೆಪಿಯ ಮನೆಯಲ್ಲಿ ಬಾಗಿಲೇ ಇಲ್ಲ ಪ್ರತಿದಿನವೂ ಅವರು ಜನರ ಸೇವೆ ಮಾಡುವುದನ್ನು ಬಿಟ್ಟು ಅಧಿಕಾರಕ್ಕೋಸ್ಕರ ಕಿತ್ತಾಟದಲ್ಲಿ ತಲ್ಲೀನರಾಗಿರುತ್ತಾರೆ, ದವರ ಸರ್ಕಾರ ತಮಗೆ ಬೇಕು ಎಂದು ಸಾರ್ವಜನಿಕರಿಗೆ ಪ್ರಶ್ನೆ ಮಾಡಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡ ಆರ್ ಕೆ ರಮೇಶ್ ಮಾತನಾಡಿ, ತೈಲಬೆಲೆ ನೂರರ ಗಡಿ ದಾಟಿದ್ದು ದಿನನಿತ್ಯ ಬಳಸುವ ವಸ್ತುಗಳು ಗಗನಕ್ಕೇರಿದ್ದು ಇದರಿಂದ ಸಾರ್ವಜನಿಕರು ಬಿಜೆಪಿಗೆ ಬೇಕಾದರೂ ಮತ ಹಾಕಿದ್ದೆವು ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಸಾರ್ವಜನಿಕರು ಸುಭಿಕ್ಷವಾಗಿ ಜೀವನ ನಡೆಸುತ್ತಾರೆ, ಬಿಜೆಪಿಯವರ ದುರಾಡಳಿತದಿಂದ ಜನ ಬೇಸತ್ತಿದ್ದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಆನಂದ್ ಗೌಡ ಮಾತನಾಡಿ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ವಲಸೆ ಕಾರ್ಮಿಕರೇ ಹೆಚ್ಚಾಗಿ ನೆಲೆಸಿದ್ದು ಅವರು ಬಹಳಷ್ಟು ಸಂಕಷ್ಟದಲ್ಲಿ ಅಣ್ಣನವರ ಮಾರ್ಗದರ್ಶನದಲ್ಲಿ ಇಂದು ಅವರಿಗೆ ದಿನಗಳನ್ನು ವಿತರಣೆ ಮಾಡಲಾಗಿದೆ, ನಮ್ಮ ಕೈಲಾದ ಸಹಾಯವನ್ನು ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಆನಂದ ಗೌಡ, ಮಧು ಗೌಡ, ಫ್ಯಾನ್ಸಿ ರಮೇಶ್, ಸಂಪಂಗಿ ರಾಮಯ್ಯ ,ಆರ್.ಕೆ. ಕೇಶವರೆಡ್ಡಿ ,ಶ್ರೀಧರ್, ಮುನಿಯಪ್ಪ ಮತ್ತಿತರರು ಹಾಜರಿದ್ದರು.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ