ರಾಜ್ಯಪಾಲರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿದ ಕೇಂದ್ರ ಸರಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಧನ್ಯವಾದ


ಬೆಂಗಳೂರು: ರಾಜ್ಯಪಾಲರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ ಜನಪರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
8 ಜನ ರಾಜ್ಯಪಾಲರ ಪೈಕಿ ಶ್ರೀ ಸತ್ಯದೇವ್ ನಾರಾಯಣ ಆರ್ಯ, ಶ್ರೀ ರಾಜೇಂದ್ರ ಅರ್ಲೇಕರ್ ಮತ್ತು ಶ್ರೀ ಥಾವರಚಂದ್ ಗೆಹಲೋತ್ ಅವರು ಎಸ್‍ಸಿ ಸಮುದಾಯಕ್ಕೆ ಸೇರಿದವರು. ಶ್ರೀ ಮಂಗೂಭಾಯಿ ಪಟೇಲ್ ಅವರು ಎಸ್‍ಟಿ ಸಮುದಾಯಕ್ಕೆ ಸೇರಿದ್ದಾರೆ. ಶ್ರೀ ರಮೇಶ್ ಬೈಸ್ ಮತ್ತು ಶ್ರೀ ಬಂಡಾರು ದತ್ತಾತ್ರೇಯ ಅವರು ಒಬಿಸಿ ಸಮುದಾಯಕ್ಕೆ ಸೇರಿದವರು. ಈ ನೇಮಕಾತಿಯು ಸಂವಿಧಾನದ ಆಶಯದ ಸಮರ್ಪಕ ಅನುಷ್ಠಾನದ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಇದಕ್ಕಾಗಿ ಪ್ರಧಾನಿಗಳನ್ನು ಮತ್ತು ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸುವುದಾಗಿ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇದುವರೆಗೆ ಕಾಂಗ್ರೆಸ್‍ನವರು ಬಿಜೆಪಿ ದಲಿತ ವಿರೋಧಿ, ಹಿಂದುಳಿದವರ ವಿರೋಧಿ ಎಂದು ಹೇಳುತ್ತಿದ್ದರು. ಇದು ನಿಜವಾದ ಬಿಜೆಪಿ ಏನು ಎಂಬುದನ್ನು ಕೇಂದ್ರ ಸರಕಾರವು ತಿಳಿಸಿ ಇದಕ್ಕೆ ಸರಿಯಾದ ಉತ್ತರ ನೀಡಿದೆ. ನಿಜವಾದ ಸಾಮಾಜಿಕ ನ್ಯಾಯ ಕೊಡುವ ಪಕ್ಷ ಬಿಜೆಪಿ ಎಂಬುದನ್ನು ಇದು ಎತ್ತಿ ಹಿಡಿದಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯಗಳು ಬಿಜೆಪಿಯಲ್ಲಿ ತೊಡಗಿಸಿಕೊಳ್ಳಲು ಈಗಿನ ಸದ್ಯದ ಸ್ಥಿತಿ ಪಾಠ ಕಲಿಸಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ