ಶಾಸಕ ದಿನೇಶ್ ಗುಂಡೂರಾವ್ ಮುಖ್ಯ ಆಯುಕ್ತ ರವರಿಂದ ಆಶ್ರಯ ಕೇಂದ್ರಕ್ಕೆ ಚಾಲನೆ :

ಬೆಂಗಳೂರು: ನಗರದ ಗಾಂಧಿನಗರ ವಾರ್ಡ್ ವ್ಯಾಪ್ತಿಯಲ್ಲಿ ತುಳಸಿ ತೋಟದ ಬಳಿ ಹೊಸದಾಗಿ ನಗರ ವಸತಿ ರಹಿತರಿಗಾಗಿ ಸ್ಥಾಪಿಸಿರುವ “ಆಶ್ರಯ ಕೇಂದ್ರ” ವನ್ನು, ಇಂದು *ಮಾನ್ಯ ಶಾಸಕ ದಿನೇಶ್ ಗುಂಡೂರಾವ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.

ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇನಲ್ಮ್)ದಡಿ ಆಶ್ರಯ ಕೇಂದ್ರಗಳಿಗೆ ಅನುದಾನ ಬರಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 10 ಆಶ್ರಯ ಕೇಂದ್ರಗಳಿವೆ. ಇಂದು ಹೊಸದಾಗಿ ಗಾಂಧಿನಗರ ವಾರ್ಡ್ ತುಳಸಿತೋಟದ ಬಳಿ ಇರುವ ಆರೋಗ್ಯ ವೈದ್ಯಾಧಿಕಾರಿ ಕಛೇರಿ ಮೇಲ್ಬಾಗದಲ್ಲಿ ಆಶ್ರಯ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ 40 ಮಂದಿ ಆಶ್ರಯ ಪಡೆಯಬಹುದಾಗಿದ್ದು, ವಸತಿ ರಹಿತರು/ನಿರಾಶ್ರಿತರು ಆಶ್ರಯ ಕೇಂದ್ರಕ್ಕೆ ಬಂದು ಆಶ್ರಯ ಪಡೆಯಬಹುದಾಗಿದೆ.

ಗೂಡ್ ಶೆಡ್ ರಸ್ತೆಯಲ್ಲಿರುವ ಆಶ್ರಯ ಕೇಂದ್ರಕ್ಕೆ ಭೇಟಿ:

ನಗರದ ಗೂಡ್‌ಶೆಡ್ ರಸ್ತೆಯಲ್ಲಿರುವ ಆಶ್ರಯ ಕೇಂದ್ರಕ್ಕೆ ಮಾನ್ಯ ಶಾಸಕರು ಶ್ರೀ ದಿನೇಶ್ ಗುಂಡೂರಾವ್, ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಭೇಟಿ ನೀಡಿ ಪರಿಶೀಲನೆ ನಡೆಸಿರು. ಈ ವೇಳೆ ಆಶ್ರಯ ಪಡೆಯುತ್ತಿರುವವರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿ ಯಾವುದೇ ಆತಂಕವಿಲ್ಲದೆ ಆಶ್ರಯ ಪಡೆಯಲು ತಿಳಿಸಿದರು.

ಗೂಡ್‌ಶೆಡ್ ರಸ್ತೆಯಲ್ಲಿರುವ ಆಶ್ರಯ ಕೇಂದ್ರದಲ್ಲಿ 40 ಮಂದಿ ಆಶ್ರಯ ಪಡೆಯುವ ವ್ಯವಸ್ಥೆಯಿದ್ದು, 38 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಪಾಲಿಕೆ ವತಿಯಿಂದ ಊಟದ ವ್ಯವಸ್ಥೆಯಿದ್ದು, ಪ್ರತಿ 15 ದಿನಕ್ಕೊಮ್ಮೆ ಆರೋಗ್ಯ ತಪಾಸಣೆ ನಡೆಯಲಿದೆ. ಯಾರಿಗಾದರು ಅನಾರೋಗ್ಯ ಸಮಸ್ಯೆಯಿದ್ದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

ಆಶ್ರಯ ಕೇಂದ್ರಗಳ ವಿವರ:

 1. ಗೂಡ್ ಶೆಡ್ ರಸ್ತೆ ಆಶ್ರಯ ಕೇಂದ್ರ-01
 2. ಗೂಡ್ ಶೆಡ್ ರಸ್ತೆ(ತುಳಸಿ ತೋಟ) ಆಶ್ರಯ ಕೇಂದ್ರ-02
 3. ರಾಮ ಮಂದಿರ, ರಾಜಾಜಿನಗರ.
 4. ಹೆಲ್ತ್ ಕಿಯೋಸ್ಕ್, ಉಪ್ಪಾರಪೇಟೆ ಮುಂಭಾಗ.
 5. ಬಿಬಿಎಂಪಿ ಹುಡುಗರ ಕಾಲೇಜು, ಗಾಂಧೀನಗರ.
 6. ಮರ್ಫಿ ಟೌನ್.
 7. ತುಮಕೂರು ರಸ್ತೆ, ದಾಸರಹಳ್ಳಿ.
 8. ಚೊಕ್ಕಸಂದ್ರ ಮುಖ್ಯ ರಸ್ತೆ, ವಾರ್ಡ್-39.
 9. ನಗರಸಭೆ ಕಟ್ಟಡ, ಹೂಡಿ ಮುಖ್ಯ ರಸ್ತೆ.
 10. ಅಂಬೇಡ್ಕರ್ ಭವನ, ಜಂಬೂಸವಾರಿ ದಿಣ್ಣೆ.
 11. ಬಾಗಲೂರು ರಸ್ತೆ, ಬಾಗಲೂರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಶೀಲನೆ:

ನಗರದ ಗಾಂಧಿನಗರ ವಾರ್ಡ್ ನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 50 ವರ್ಷಗಳ ಹಳೆಯ ಕಟ್ಟಡವಾಗಿದ್ದು, ಸಂಪೂರ್ಣವಾಗಿ ಸಿಮೆಂಟ್ ಗಾರೆಯಿಂದ ನಿರ್ಮಿಸಿರುತ್ತಾರೆ. ಈ ಕಟ್ಟಡವನ್ನು ಆಗಿನ ಮೈಸೂರು ಒಡೆಯರಿಂದ ಪ್ರಾರಂಭಿಸಲಾಗಿದ್ದು, ಪುರಾತನ ಕಟ್ಟಡವನ್ನು ಸಂರಕ್ಷಿಸಲು ಹಾಗೂ ಉನ್ನತೀಕರಿಸಲು Development of Gandhinagar school building pooW 2018-1940 ಲೆಕ್ಕಶೀರ್ಷಿಕೆ 3495(Special Development Works) ಅಡಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪುನರ್ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇಂದು ಮಾನ್ಯ ಶಾಸಕರು ಶ್ರೀ ದಿನೇಶ್ ಗುಂಡೂರಾವ್, ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಭೇಟಿ ನೀಡಿ ಪರಿಶೀಲನೆ ನಡೆಸಿರು. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಾತಂತ್ರ್ಯ ಉದ್ಯಾನವನ ಪರಿಶೀಲನೆ:

ನಗರದ ಸ್ವಾತಂತ್ರ್ಯ ಉದ್ಯಾನವನವನ್ನು ಮಾನ್ಯ ಶಾಸಕರು ಶ್ರೀ ದಿನೇಶ್ ಗುಂಡೂರಾವ್, ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಪರಿಶೀಲನೆ ನಡೆಸಿದರು. ಸ್ವಾತಂತ್ರ್ಯ ಉದ್ಯಾನವನವು ಸುಮಾರು 21 ಎಕರೆ ಪ್ರದೇಶದಲ್ಲಿದ್ದು, ವಾಯುವಿಹಾರ ಮಾರ್ಗ, ಫೌಂಟೇನ್, ಆಡಿಟೋರಿಯಂ, ಲ್ಯಾಂಡ್ ಸ್ಕೇಪಿಂಗ್, ಶೌಚಾಲಯ ಸೇರಿದಂತೆ ಇನ್ನಿತರೆ ಕೆಲ ಸ್ಟ್ರಕ್ಚರ್‌ಗಳನ್ನು ಪುನರ್ ನವೀಕರಣ ಮಾಡಬೇಕಿದ್ದು, ಅದಕ್ಕೆ ಅನುದಾನ ಒದಗಿಸಲು ಮಾನ್ಯ ಶಾಸಕರು ಮುಖ್ಯ ಆಯುಕ್ತರಿಗೆ ಮನವಿ ಮಾಡಿದರು. ಈ ವೇಳೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಉದ್ಯಾನವನ ಪುನರ್ ನವೀಕರಣಕ್ಕೆ ಸಂಬಂಧಿಸಿಂದತೆ ಏನೇನು ಕೆಲಸ ಆಗಬೇಕೆಂಬ ರೂಪುರೇಷೆ ಸಿದ್ದಪಡಿ ಎಷ್ಟು ಅನುದಾನ ಬೇಕಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲು ಪಾಲಿಕೆ ತೋಟಗಾರಿಕಾ ವಿಭಾಗದ ಅಧಿಕಾರಿಗೆ ತಿಳಿಸಿದರು.

ಈ ವೇಳೆ ವಿಶೇಷ ಆಯುಕ್ತರು(ಕಲ್ಯಾಣ) ಶ್ರೀ ರವಿಂದ್ರ, ಪಶ್ಚಿಮ ವಲಯ ಜಂಟಿ ಆಯುಕ್ತರು ಶಿವಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ