ಯಲಹಂಕ ವಲಯ ವ್ಯಾಪ್ತಿಯ ಕುವೆಂಪುನಗರ ವಾರ್ಡ್ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಹಾಗೂ ಮನೆ ಮನೆ ಸಮೀಕ್ಷೆ :

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದ ಆರೋಗ್ಯಾಧಿಕಾರಿಗಳು, ಉಪ ಆರೋಗ್ಯಾಧಿಕಾರಿಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಆರೋಗ್ಯ ನಿರೀಕ್ಷಕರ ತಂಡ ಸದರಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನಕ್ಕೆ ಕೋವಿಡ್ ಬಗ್ಗೆ ಅರಿವು ಮೂಡಿಸಿರುವುದು ಹಾಗೂ ಕುವೆಂಪುನಗರ ವಾರ್ಡ್ ಸಂಖ್ಯೆ-11ರ ವ್ಯಾಪ್ತಿಯ ಸಿಂಗಾಪುರ, ಶ್ರೀನಿಧಿ ಹಾಗೂ ಸೋಮಣ್ಣ ಬಡಾವಣೆಗಳಲ್ಲಿ ಒಟ್ಟಾರೆ 20 ಜನರಿಗೆ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. ಈ ಸಂಭಂದಪಟ್ಟ ಇಂದು ತಪಾಸಣಾ ಕಾರ್ಯ ನಡೆಸಿ ಕೋವಿಡ್ ಸೋಂಕು ದೃಢಪಟ್ಟ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಅಲ್ಲಿ ಕೋವಿಡ್ -19 ಸೋಂಕಿನ ಲಕ್ಷಣಗಳೊಳಗೊಂಡ ಜನರಿಗೆ, ILI , SARI, ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು ಮತ್ತು Comorbid conditions ಇರುವ ಜನರಿಗೆ ಅರಿವು ಮೂಡಿಸಲಾಗಿದೆ. ಅದಲ್ಲದೆ ಕೋವಿಡ್ ಪರೀಕ್ಷೆಗೊಳಪಡಿಸುವುದು ಹಾಗೂ ಕೋವಿಡ್-19 ಸೋಂಕು ಧೃಡಪಟ್ಟಿರುವ ಮನೆಗಳಿಗೆ ವೈದ್ಯರು ಹಾಗೂ ಆರೋಗ್ಯಸಿಬ್ಬಂದಿಗಳು ಭೇಟಿ ನೀಡಿ ಅಲ್ಲಿರುವ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರಿಗೆ ಪರೀಕ್ಷೆ ನಡೆಸುತ್ತಿದ್ದಾರೆ.

ಕೋವಿಡ್-19 ಸೋಂಕು ಧೃಡಪಟ್ಟಿರುವ ಮನೆಗಳನ್ನು ಸೀಲ್ ಮಾಡಲಾಗಿದ್ದು, ಸದರಿ ಪ್ರದೇಶದಲ್ಲಿ ಇನ್ನು ಹೆಚ್ಚಾಗಿ ಕೋವಿಡ್ ಪರೀಕ್ಷೆ ನಡೆಸುವುದು ಹಾಗೂ ಜನರಲ್ಲಿ ಅರಿವು ಮೂಡಿಸಲು ಆಟೋ ಮುಖಾಂತರ ಪ್ರಚಾರ ಮಾಡಲಾಗುತ್ತಿದೆ. ಸದರಿ ಪ್ರದೇಶಗಳಲ್ಲಿ sodium hypochloride ದ್ರವವನ್ನು ಸಿಂಪಡಣೆ ಸಹಾ ಮಾಡಲಾಗುತ್ತಿದೆ ಎಂದು ಉಪ ಆರೋಗ್ಯಾಧಿಕಾರಿ ಡಾ. ಕಲ್ಪನಾ ರವರು ತಿಳಿಸಿದ್ದಾರೆ.

Leave a Reply

Your email address will not be published.

error

ನಮ್ಮ ಜತೆಗೆ ಕೈ ಜೋಡಿಸಲು Subscribe ಮಾಡಿ